ನಾನೆಂಬ ಸ್ತ್ರೀ

ನಾನೆಂಬ ಸ್ತ್ರೀ

ನನ್ನೊಳಗಿನ ಅಗ್ನಿಕುಂಡದಲ್ಲುರಿದು

ಆಹುತಿಯಾಗಲಾರೆ

ಜ್ವಲಂತ ವಿಚಾರಗಳನ್ನೆಲ್ಲಾ

ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ

ಜೋಡಿಸಿಟ್ಟಿದ್ದೀನಿ

ಬಿಕ್ಕಳಿಸುತ್ತಾ ವಿಕಸಿತವಾಗುವ

ಮಣ್ಣಲ್ಲಿ

ನಿದಿರೆಗೆ ಜಾರುವಾಗಲೂ

ಬೆಳಕೆಂಬ ಅಮ್ಮ

ನಂದಾದೀಪವಾಗಿ ಉರಿಯುತಿರಲು

ಹುತ್ತರಿ ತೆನೆ ಗದ್ದೆಗಳ

ಪುಣ್ಯ ಭೂಮಿಯಲಿ

ಬೆಳೆಯುವ ಕ್ರಾಂತಿ ಬೀಜವನು

ಅವಳು ಬಿತ್ತುತ್ತಿದ್ದಾಳೆ



ನೀನಿನ್ನು ಮೈಕೊಡವಿ

ಎದ್ದು ಬಾ

ಅಂಧಕಾರದ ಆತ್ಮವೊಂದು ಕರೆಯುತ್ತಿದೆ



ಬಂಧನದ ಸರಪಳಿ

ನೋವಿನ ವೇಷಗಳನ್ನು ಕಿತ್ತೆಸೆದು

ಅವಳು ಮುಗುಳ್ನಕ್ಕಳು



ದೀರ್ಘ ಶಾಂತ ನಿಗೂಢ

ಜೋಕಾಲಿಯಲಿ ನಿದ್ರಿಸಿದ್ದ

ಬೆಳಗು ಕಿರಣಗಳು ಎಚ್ಚೆತ್ತು

ಮೌನಿ ಮುಕ್ತಿ ಕುಟೀರದ

ನೆತ್ತಿಯಲ್ಲುರಿದು ಕರಗಿ

ಅಗ್ನಿ ಜ್ವಾಲೆಯಾಗಿ

ಧಗಧಗಿಸಿದವು...


(ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ) (ಚಿತ್ರ ಕೃಪೆ: ಕೆಪಿಎನ್)

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ